`ರಾಂಲೀಲಾ` ಚಿತ್ರೀಕರಣ ಪೂರ್ಣ
Posted date: 06 Thu, Aug 2015 – 10:17:05 AM

 ಸೌಂದರ್ಯ ಜಗದೀಶ್ ಅವರು ಸೌಂದರ್ಯ ಜಗದೀಶ್ ಫ಼ಿಲಂ ಲಾಂಛನದಲ್ಲಿ ನಿರ್ಮಿಸುತ್ತಿರುವ ಬಹುನಿರೀಕ್ಷೆಯ ‘ರಾಮ್ ಲೀಲಾ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಸಂಕಲನ ಕಾರ್ಯ ಕೂಡ ಮುಕ್ತಾಯವಾಗಿದ್ದು, ಸದ್ಯ ಮಾತುಗಳ ಜೋಡಣೆ ನಡೆಯುತ್ತಿದೆ.  
    ‘ನಮ್ಮ ಸಂಸ್ಥೆಯಿಂದ ಇದುವರೆಗೂ ಸದಭಿರುಚಿಯ ಚಿತ್ರಗಳನ್ನೇ ನೀಡುತ್ತಾ ಬಂದಿರುವೆ. ‘ರಾಮ್ ಲೀಲಾ ಕೂಡ ಜನರ ಅಭಿರುಚಿಗೆ ತಕ್ಕಂತೆ ಸದಾ ನೆನಪಿನಲ್ಲಿ ಉಳಿಯುವಂತಹ ಚಿತ್ರವಾಗುತ್ತದೆ ಎಂದು ನಿರ್ಮಾಪಕ ಸೌಂದರ್ಯ ಜಗದೀಶ್ ತಿಳಿಸಿದ್ದಾರೆ.
    ವಿಜಯ್ ಕಿರಣ್ ನಿರ್ದೇಶನದ ಈ ಚಿತ್ರಕ್ಕೆ ಅನೂಪ್ ರುಬೆನ್ಸ್ ಅವರ ಸಂಗೀತ ನಿರ್ದೇಶನವಿದೆ. ಭರಣಿ.ಕೆ.ಧರನ್ ಛಾಯಾಗ್ರಹಣ, ಜೋ.ನಿ.ಹರ್ಷ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
   ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಅಮೂಲ್ಯ. ಸಂಜನಾ, ಸಾಧುಕೋಕಿಲ, ರಂಗಾಯಣ ರಘು, ರವಿಕಾಳೆ, ಚಿಕ್ಕಣ್ಣ, ರವಿಶಂಕರ್ ಗೌಡ, ಶೋಭ್‌ರಾಜ್, ಊರ್ವಶಿ, ತುಳಸಿ, ಟೆನ್ನಿಸ್ ಕೃಷ್ಣ, ಮೋಹನ್ ಜುನೇಜ, ಪಿ.ಎನ್.ಸತ್ಯ, ಸಿಹಿಕಹಿ ಚಂದ್ರು, ಕಡ್ಡಿಪುಡಿ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed